ಇತಿಹಾಸ

ದೇವಾಲಯದ ಇತಿಹಾಸ




ಉಡುಪಿಯ ಕೃಷ್ಣನ ಆಸುಪಾಸುಗಳಲ್ಲಿ ನಾಲ್ಕು ದುರ್ಗಾಲಯಗಳಿವೆ. ಒಂದು: ಕಡಿಯಾಳಿಯ ಮಹಿಷಮರ್ಧಿನಿಯ ಗುಡಿ, ಎರಡು: ಬ್ಯೆಲೂರಿನ ಮಹಿಷಾಸುರ ಮರ್ಧಿನಿಯ ಗುಡಿ, ಮೂರು: ಕನ್ನರ್ಪಾಡಿಯ ಜಯದುರ್ಗೆಯ ಗುಡಿ, ನಾಲ್ಕು: ಪುತ್ತೂರಿನ ಲಿಂಗರೂಪಿ ದುರ್ಗೆಯ ಗುಡಿ. ಈ ದೇವಾಲಯಗಳಲ್ಲಿ ಕಡಿಯಾಳಿಯ ದೇವಾಲಯ ಅತ್ಯಂತ ಪುರಾತನವಾದ ಇತಿಹಾಸವನ್ನು ಪಡೆದಿದೆ. ಆ ದೇವಾಲಯದ ಮೂರ್ತಿ ಮತ್ತು ವಾಸ್ತು ಶಿಲ್ಪವನ್ನು ಪರಿಶೀಲಿಸಿದಾಗಲೂ ಈ ಸಂಗತಿ ವೇದ್ಯವಾಗುತ್ತದೆ.

ಕಡಿಯಾಳಿಯ ಮಹಿಷಮರ್ದಿನಿಯ ವಿಗ್ರಹಕ್ಕೆ ಸುಮಾರಾಗಿ ಹೊಲುವ ಇನ್ನೊಂದು ವಿಗ್ರಹದ ಮಾದರಿಯನ್ನು ನಾವು ಪೊಳಲಿಯ ಹೊರ ಪೌಳಿಯಲ್ಲಿರುವ ದುರ್ಗಾವಿಗ್ರಹದಲ್ಲಿ ಕಾಣಬಹುದು. ಇದೂ ಇದರ ಪ್ರಾಚೀನತೆಗೆ ಇನ್ನೊಂದು ಸಾಕ್ಷಿ ಎನ್ನಬಹುದು.


ಶಿಲ್ಪಕಲೆಯ ಸೋಬಗು

ಸುಮಾರು ೩೦ ಇಂಚು ಎತ್ತರದ ಈ ವಿಗ್ರಹದ ಮುಖದಲ್ಲಿ ಪ್ರಸನ್ನತೆಯ, ವಿಜಯದ ಮಂದಹಾಸವಿದೆ. ಮೇಲಿನ ಎರಡು ಕೈಗಳಲ್ಲಿ ಚಕ್ರ-ಶಂಖ, ಕೆಳಗಿನ ಬಲಗೈಯಲ್ಲಿ ತ್ರಿಶೂಲ, ಅದರ ತುದಿಯ ಚೂಪು ಮೇಲುಮುಖವಾಗಿ ತಲೆಯ ಎತ್ತರಕ್ಕೆ ಸಮನಾಗಿ ನೇರವಾಗಿದ್ದು ಶಿಲ್ಪದ ಒತ್ತಿಂದಕ್ಕೆ ಒಂದು ಸವಂತೋಲವನ್ನು ತಂದಿದೆ. ಶೂಲದ ಕೆಳಬದಿ ದೇವಿಯ ಕಾಲಬುಡದಲ್ಲಿ ಸತ್ತುಬಿದ್ದಿರಿವ ಮಹಿಷನ ತಲೆಯನ್ನು ಒತ್ತಿ ಹಿದಿದಿದೆ. ಹಿಮ್ಗಾಲು ಎತ್ತಿ ಮುಗ್ಗರಿಸಿ ಬಿದ್ದ ಮಹಿಶನ ಬಾಲ ದೇವಿಯ ಎಡಗೈಯಲ್ಲಿದೆ.

ಇಲ್ಲಿ ಮಹಿಷಾಸುರನೂ ರಾಕ್ಶಸನ ಆಕಾರದಲ್ಲಿರದೆ ಸಹಜವಾದ ಕೋಣನಂತೆಯೇ ಆಅತಿಯನ್ನು ಆಕೃತಿಯನ್ನು ಚಿತ್ರಿಸಲಾಗಿದೆ. ಮಹಿಷ ನಮ್ಮ ಅಜ್ಞ್ನಾನ , ಆಲಸ್ಯ ಮಾಂದ್ಯಗಳ ಸಂಕೇತವಾದರೆ ದೇವಿ ಜ್ಞ್ನಾನಶಕ್ತಿಯ ಪ್ರತೀಕ, ತ್ರಿಶೂಲದ ಮೂರು ಮೊನೆಗಳೇ ಜ್ಞ್ನಾನಶಕ್ತಿ, ಇಚ್ಚಾಶಕ್ತಿ, ಕ್ತಿಯಾಶಕ್ತಿಗಳು. ಬಲಗೈಯ ಚಕ್ರವೇ ಸೃಷ್ತಿ ಚಕ್ರವೂ ಹೌದು, ಧರ್ಮ ಚಕ್ರವೂ ಹೌದು. ಶಂಖ ಸಂಪತ್ತಿನ ಸಮೃದ್ದಿಯ ಪ್ರತೀಕವೂ ಹೌದು; ಓಂಕಾರದ ನಾದದ ಪ್ರತೀಕವೂ ಹೌದು. ಶಂಖ ಸಂಪತ್ತಿನ ಸಮೃದ್ದಿಯ ಪ್ರತೀಕವೂ ಹೌದು.

ನಿಂತ ಬಂಗಿ, ಮುಖದ ಚಹರೆ, ಆಯುಧಗಳನ್ನು ಹಿಡಿದ ಭಾತಿಯಲ್ಲಿ ಕಾಣುವ ಅನಾಶಕ್ತಿ ಇವುಗಳಿಂದ ದೇವಿಗೆ ಇಂಥ ಶತ್ರುನಿಗ್ರಹ ಒಂದು ಲೀಲಾವಿನೋದ ಎನ್ನುವ ಭಾವವನ್ನು ದ್ವನಿಸುವ ಅಪೂರ್ವ ಶಕ್ತಿ ಈ ಶಿಲ್ಪಕ್ಕೆ ಬಂದಿದೆ ಎಂತಲೇ ಇದೊಂದು ಅಪೂರ್ವ ಶಿಲ್ಪ.